

19th February 2026

ಬೆಳಗಾವಿ- ಜಂಬಗಿ ಸೂಪರ್ ಸ್ಪೆಷಾಲಿಟಿ ನೇತ್ರ ಸಂಸ್ಥೆ ಹಾಗೂ ಬೆಳಗಾವಿ ಲೇಸರ್ ಮತ್ತು ಕಾಂಟ್ಯಾಕ್ಟ್ ಲೆನ್ಸ್ ಕ್ಲಿನಿಕ್ ಬೆಳಗಾವಿಯಲ್ಲಿ ೨೨/೦೨/೨೦೨೬ ರಂದು ಉದ್ಘಾಟನೆಗೊಳೃಲಿದೆ. ವಿಶ್ವಮಟ್ಟದ ದೃಷ್ಟಿ ಆರೈಕೆ ಇದೀಗ ನಿಮ್ಮೂರಲ್ಲೆ,
``ದೂರದ ನಗರಗಳಿಗೆ ಪ್ರಯಾಣಿಸದೇ, ಬೆಳಗಾವಿಯಲ್ಲೇ ಜಾಗತಿಕ ಮಟ್ಟದ ಕಣ್ಣು ಚಿಕಿತ್ಸೆಯನ್ನು ಪಡೆಯುವ ಹಕ್ಕು ಬೆಳಗಾವಿಯ ಜನರಿಗೆ ಇದೆ,’’ ಎಂದು ಡಾ. ಅಮೋಘ ಲಕ್ಷ್ಮಣ ಜಂಬಗಿ ಅವರು ಹೇಳಿದರು. ``ಡಾ. ಲಕ್ಷ್ಮಣ ಜಂಬಗಿ ಮತ್ತು ಡಾ. ವರ್ಷಾ ಜಂಬಗಿ ಅವರ ೩೦ ವರ್ಷಗಳ ಸೇವಾ ಪರಂಪರೆಯ ಮೇಲೆ ನಿರ್ಮಿತವಾಗಿರುವ ಈ ಸಂಸ್ಥೆ, ಮಾನವೀಯ ಸೇವೆಯನ್ನು ಅತ್ಯಾಧುನಿಕ ತಂತ್ರಜ್ಞಾನದೊAದಿಗೆ ಸಂಯೋಜಿಸಿ, ರೋಗಿಗಳಿಗೆ ಅತಿ ಶೀಘ್ರ ಹಾಗೂ ಉತ್ತಮ ದೃಷ್ಟಿ ಫಲಿತಾಂಶವನ್ನು ಒದಗಿಸುತ್ತದೆ.’’
ಡಾ. ಲಕ್ಷ್ಮಣ ಜಂಬಗಿ ಮತ್ತು ಡಾ. ವರ್ಷಾ ಜಂಬಗಿ ಅವರ ರೋಗಿಗಳ ಸೇವಾ ಪರಂಪರೆಯನ್ನು ಮುಂದುವರೆಸುತ್ತಾ, ಡಾ. ಅಮೋಘ ಲಕ್ಷ್ಮಣ ಜಂಬಗಿ ಅವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಜಂಬಗಿ ಸೂಪರ್ ಸ್ಪೆಷಾಲಿಟಿ ನೇತ್ರ ಸಂಸ್ಥೆ ಆರಂಭಗೊಳ್ಳಲಿದೆ. ೩೫,೦೦೦ ಚದರ ಅಡಿಗಳ ವಿಶಾಲ ಹಾಗೂ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಈ ಸಂಸ್ಥೆ, ಒಂದೇ ಸೂರಿನಡಿ ಸಂಪೂರ್ಣ ಕಣ್ಣಿನ ಚಿಕಿತ್ಸೆಯನ್ನು ಒದಗಿಸುತ್ತದೆ. ಇದರಲ್ಲಿ ಕಣ್ಣಿನ ಮೋತಿ ಬಿಂದು (ಕ್ಯಾಟರಾಕ್ಟ್), ಕಾರ್ನಿಯಾ, ರೆಟಿನಾ, ಗ್ಲೂಕೋಮಾ, ಮಕ್ಕಳ ನೇತ್ರಚಿಕಿತ್ಸೆ, ಒಕ್ಯುಲೋಪ್ಲಾಸ್ಟಿ, ನ್ಯೂರೋ-ಆಫ್ತಾಲ್ಮಾಲಜಿ, ರಿಫ್ರಾಕ್ಟಿವ್ ಶಸ್ತçಚಿಕಿತ್ಸೆ ಸೇರಿದಂತೆ ವಿಶೇಷ ಡ್ರೆöÊ ಐ ಹಾಗೂ ಕಾಂಟ್ಯಾಕ್ಟ್ ಲೆನ್ಸ್ ಕ್ಲಿನಿಕ್ ಕೂಡ ಸೇರಿದೆ.
ನಮ್ಮ ಸಂಸ್ಥೆಯು ಈ ಪ್ರದೇಶದಲ್ಲೆ ಮೊದಲ ಬಾರಿಗೆ ರೋಬೋಟಿಕ್ ೪ಆ ಫ್ಯಾಕೋ ಕ್ಯಾಟರಾಕ್ಟ್ ಶಸ್ತçಚಿಕಿತ್ಸೆ ಹಾಗೂ ಕನ್ನಡಕ ಮುಕ್ತಿಗಾಗಿ ಜೈಸ್ಸ್ ಒಇಐ ೯೦ ಎಕ್ಸೆöÊಮರ್ ಲೇಸರ್ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ. ಈ ತಂತ್ರಜ್ಞಾನವು ಹೆಚ್ಚಿನ ನಿಖರತೆ, ಸುರಕ್ಷತೆ ಮತ್ತು ವೇಗವಾದ ಗುಣಮುಖತೆಯನ್ನು ಖಚಿತಪಡಿಸುತ್ತದೆ.
ಡಾ. ಅಮೋಘ ಜಂಬಗಿ ಅವರೊಂದಿಗೆ ವಿವಿಧ ಉಪವಿಭಾಗಗಳಲ್ಲಿ ಫೆಲೋಶಿಪ್ ಪಡೆದ ಪರಿಣತ ವೈದ್ಯರ ತಂಡವೂ ಕಾರ್ಯನಿರ್ವಹಿಸುತ್ತದೆ. ಡಾ. ಜಗದೀಶ ಪಾಟೀಲ, ಡಾ. ಹೇಮಂತ್, ಡಾ. ಸ್ನೇಹಾ ಬಂಡೂರ್ಗೆ ಹಾಗೂ ಡಾ. ಮಿತಾಲಿ ಶಾ ಸೇರಿದಂತೆ ತಜ್ಞ ವೈದ್ಯರು ಸೇರಿಕೊಂಡಿದ್ದು. ದಿನದ ೨೪ ಗಂಟೆಯೂ ಸಮಗ್ರ ನೇತ್ರ ಆರೈಕೆಯನ್ನು ಒದಗಿಸಲಿದ್ದಾರೆ.
ತಮ್ಮ ಸೇವಾ ಮೂಲ್ಯಗಳಿಗೆ ನಿಷ್ಠೆಯಾಗಿ, ಈ ಸಂಸ್ಥೆಯು ಉತ್ತಮ ಮಾದರಿಯ ಚಿಕಿತ್ಸೆಗಳು ಹಾಗೂ ಸಮುದಾಯ ಮಟ್ಟದ ಸೇವಾ ಕಾರ್ಯಕ್ರಮಗಳನ್ನು ನಡೆಸಲಿದ್ದು, ಸಮಾಜದ ಎಲ್ಲ ವರ್ಗದ ರೋಗಿಗಳಿಗೆ ಗುಣಮಟ್ಟದ ಕಣ್ಣು ಚಿಕಿತ್ಸೆ ದೊರಕುವಂತೆ ಮಾಡಲಿದೆ. ಸಂಸ್ಥೆಯ ಉದ್ಘಾಟನಾ ಸಮಾರಂಭಕ್ಕೆ ಗಣ್ಯ ವ್ಯಕ್ತಿಗಳು ಹಾಗೂ ಎಲ್ಲ ಸಮುದಾಯದ ನಾಯಕರ ಉಪಸ್ಥಿತಿ ಇರಲಿದ್ದು, ಬೆಳಗಾವಿ ಪ್ರದೇಶವು ವಿಶ್ವಮಟ್ಟದ ನೇತ್ರ ಆರೈಕೆ ಸುಲಭವಾಗಿ ಲಭಿಸುವ ಮಹತ್ವದ ಘಟ್ಟವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ನಮ್ಮ ಸಿಬ್ಬಂದಿಯೊAದಿಗೆ ಸಂಪರ್ಕಿಸಿರಿ: +೯೧ ೮೨೨೯೦ ೦೮೨೨೧ +೯೧ ೮೨೨೯೦ ೦೮೨೨೫

ಕಾಸರಗೋಡು ಕನ್ನಡ ಭವನದಲ್ಲಿ ಈ 22ಭಾನುವಾರ ನಡೆಯಲಿರುವ "ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಎಡನೀರು ಶ್ರೀಗಳಿಂದ ಬಿಡುಗಡೆ.

ವಿದೇಶಿ ಮಹಿಳೆ ಅತ್ಯಾಚಾರ ಮತ್ತು ಪ್ರವಾಸಿಗನ ಕೊಲೆ ಪ್ರಕರಣ- ಆರೋಪ ಸಾಬೀತು: ಮೂರು ಅಪರಾಧಿಕಾರಿಗಳಿಗೆ ಮರಣ ದಂಡನೆ- ಗಂಗಾವತಿ ನ್ಯಾಯಾಲಯದಿಂದ ಐತಿಹಾಸಿಕ ತೀರ್ಪು: ಜನರ ಶ್ಲಾಘನೆ

ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026. ಸಮ್ಮೇಳನ ಸರ್ವಾಧ್ಯಕ್ಷರ ಆಯ್ಕೆ.